Pratilipi Kannada - ಪ್ರತಿಲಿಪಿ ಕನ್ನಡ

Pratilipi Kannada - ಪ್ರತಿಲಿಪಿ ಕನ್ನಡ

Share

Discover, read and share your favorite stories, poems and books in a language, device and format of your choice.

ಜಡ್ಜ್ ಮೆಂಟ್ (ಪ್ರೀತಿ ಕುರುಡಲ್ಲ.....) ❤️❤️ « Rashmi Manjunath | ಪ್ರತಿಲಿಪಿ 08/08/2026


ಶಾರದ ಬಾಗಿಲ ಬಳಿ ನಿಂತು ಗಂಡ ವಿಶ್ವನಾಥ್ ದಾರಿ
ಕಾಯುತ್ತಿದ್ದಳು. ಪ್ರತಿ ನಿಮಿಷ ಗಡಿಯಾರದ ಕಡೆ ನೋಡುತ್ತಿದ್ದಳು, ರೂಮಿಗೆ ಹೋಗಿ ಪ್ಯಾಕ್ ಮಾಡಿರುವ ಬಟ್ಟೆ ಬರೆ ಸರಿ ಇದೆಯೇ ಎಂದು ನೋಡಿಕೊಂಡು ಬಂದಳು.

"ಖುಷಿ , ಹಿತ ಎಲ್ಲೂ ಹೋಗಬೇಡಿ ಮಕ್ಕಳ, ಮೊದಲೇ ಟ್ರೈನಿಗೆ ಟೈಮ್ ಆಗಿದೆ ... ಎಲ್ಲಿ ಹೋದರು ನಿಮ್ಮ ಅಪ್ಪ !?ಇಷ್ಟು ಹೊತ್ತಾಗಿ ಬರಲಿಲ್ಲ " ಆತಂಕದಿಂದ ಮಕ್ಕಳಿಗೆ ಹೇಳಿದಳು. ಅಷ್ಟರಲ್ಲಿ ಮನೆಯ ಮುಂದೆ ಕಾರ್ ಬಂದು ನಿಂತ ಶಬ್ದ ಕೇಳಿ ಹೊರಗೆ ಬಂದಳು.

ತನ್ನ ಗೆಳೆಯನ ಕಾರ್ ನಲ್ಲಿ ಬಂದು ಇಳಿದ ವಿಶ್ವನಾಥ. "ಟೈಮ್ ಆಗುತ್ತಾ ಇದೆ ವಿಶ್ವ , ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಎಲ್ಲಿ ಹೋಗಿದ್ದೆ!? " ಎಂದು ಗಂಡನನ್ನು ಕೇಳಿದಳು.

"ಮಕ್ಕಳಿಗೆ ಸರ್ಪ್ರೈಸ್ ಇದೆ " ಎಂದು ಹೇಳಿ ಕೈನಲ್ಲಿ ಇದ್ದ ಬರ್ತಡೇ ಕೇಕ್ ನ ಪ್ಯಾಕೆಟ್ ಅನ್ನು ತೋರಿಸಿದ.

"ಸರಿ ಸರಿ ನಡೆಯಿರಿ "ಎಂದು ಮನೆಯ ಬೀಗ ಹಾಕಿ ಕಿಟ್ ಗಳನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟು ಮಕ್ಕಳನ್ನು ಹತ್ತಿಸಿ ರೈಲ್ವೆ ಸ್ಟೇಷನ್ ಕಡೆಗೆ ಹೊರಟರು.

ಸ್ಟೇಷನ್ ತಲುಪಿದ ಕೂಡಲೇ ಕನ್ಯಾಕುಮಾರಿಗೆ ಹೊರಡುವ ರೈಲು ಹತ್ತಿ ಕುಳಿತರು. ಖುಷಿ ಮತ್ತು ಹಿತ ಹತ್ತಿದ ಕೂಡಲೇ ಸಂತೋಷದಿಂದ ಚಪ್ಪಾಳೆ ತಟ್ಟಿ ಕುಣಿದಾಡಿದರು " ಏ...ಟ್ರೈನ್ ಟ್ರೈನ್ " . ಐದು ವರ್ಷದ ಎರಡು ಪುಟ್ಟ ಗೊಂಬೆಗಳ ಹಾಗೆ ಕಾಣುತ್ತಾ ಇದ್ದ ಆ ಮಕ್ಕಳನ್ನು ಭೋಗಿಯಲ್ಲಿ ಇದ್ದ ಜನ ನೋಡುತ್ತ ಇದ್ದರು. ಮಕ್ಕಳ ಈ ಸಂತೋಷಕ್ಕೆ ಕಾರಣವಿಲ್ಲದೆ ಇರಲಿಲ್ಲ... ಅವರು ಇದೇ ಮೊದಲು ರೈಲು ಹತ್ತಿದ್ದು.

ಕಾಲೇಜು ಒಂದರಲ್ಲಿ ಪ್ರಾಧ್ಯಾಪಕ ಆಗಿದ್ದ ವಿಶ್ವನಾಥ್ ರಜದ ಸಮಯದಲ್ಲಿ ಟ್ಯೂಷನ್ ಮಾಡುತ್ತಿದ್ದರಿಂದ ಅವನಿಗೆ ಬಿಡುವು ಸಿಗುವುದು ವಿರಳ ಆಗಿತ್ತು , ಹಾಗಾಗಿ ಇದೇ ಮೊದಲ ಬಾರಿಗೆ ಮಕ್ಕಳನ್ನು ಕರೆದುಕೊಂಡು ದೂರದ ಪ್ರವಾಸಕ್ಕೆ ಹೊರಟಿದ್ದ.

"ಚಾಯ್ ,ಕಾಫಿ ,ಬಿಸ್ಕೆಟ್" ಎಂದು ಕೂಗುತ್ತಾ ಮಾರಲು ಹುಡುಗನೊಬ್ಬ ಬಂದ. ಅದನ್ನು ನೋಡಿದ ಹಿತ ತಾಯಿಯನ್ನು ಕೇಳಿದಳು "ಅಮ್ಮ ,ನನಗೆ ಬಿಸ್ಕೇಟು" ತುಂಬಾ ಮೆಲು ದನಿಯಲ್ಲಿ ಅದು ಶಾರದಾಗೆ ಕೇಳಿಸಿತೋ ಇಲ್ಲವೋ ..

ಅಷ್ಟರಲ್ಲಿ ಖುಷಿ "ಅಣ್ಣ ಬಿಸ್ಕೆಟ್ ಕೊಡು " ಎಂದು ಜೋರಾಗಿ ಕೂಗಿ ಬಿಸ್ಕೆಟ್ ಪ್ಯಾಕೆಟ್ ತಾನೇ ತೆಗೆದುಕೊಂಡುಬಿಟ್ಟಳು.

"ತಗೊಳೆ ಹಿತ " ಎಂದು ಅದನ್ನು ಅವಳಿಗೆ ಕೊಟ್ಟಳು.
" ಥಾಂಕ್ಸ್ ಅಕ್ಕ " ಎಂದು ಅದನ್ನು ತಿನ್ನಲು ತೊಡಗಿದಳು ಹಿತ. ಕೇವಲ ಹಿತಾಗಿಂತ 10 ನಿಮಿಷ ಮೊದಲು ಹುಟ್ಟಿದ್ದಕ್ಕೆ ಖುಷಿ ಅಕ್ಕನಾದಳು.

ಟ್ರೈನ್ ಹೊರಟಿತು ಕನ್ಯಾಕುಮಾರಿ ಕಡೆಗೆ. ಇವರ ಎದುರಿನ ಸೀಟ್ ನಲ್ಲಿ ಕುಳಿತಿದ್ದ ಸುಷ್ಮಾ ಮಕ್ಕಳನ್ನು ನೋಡಿ ನಕ್ಕು

" ಇಬ್ಬರು ಮಕ್ಕಳು ಒಂದೇ ರೀತಿ ಇದ್ದಾರೆ, ನೀವು ಅದು ಹೇಗೆ ಗುರುತು ಹಿಡಿಯುತ್ತೀರಾ !? " ಎಂದು ಶಾರದಾಳನ್ನು ಕೇಳಿದಳು .

" ನಮಗೆ ಅದು ತಿಳಿಯುತ್ತದೆ.. ಇವಳೇ ಖುಷಿ ಇವಳೇ ಹಿತ ಎಂದು ಹೊಸದಾಗಿ ನೋಡುವವರಿಗೆ ಗೊತ್ತಾಗುವುದಿಲ್ಲ... ಆದರೆ ಒಂದು ಕಾಸಗಲದ ಮಚ್ಚೆ ಹಿತ ಎಡಗೈಲಿ ಇದೆ " ಎಂದು ಹೇಳಿ ಆಕೆಗೆ ಹಿತಾಳ ಕೈಯಲ್ಲಿದ್ದ ಮಚ್ಚೆ ತೋರಿಸಿದಳು.

ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತ ಇದ್ದ
ಖುಷಿ " ನಾನು ಖುಷಿ ಅವಳು ನನ್ನ ತಂಗಿ ಹಿತ " ಎಂದು ಹೇಳಿದಳು.

"ಅಬ್ಬಬ್ಬಾ.. ಖುಷಿ ಹೆಸರಿಗೆ ತಕ್ಕ ಹಾಗೆ ಇದ್ದೀಯ ಕಂದ " ಎಂದು ಹೇಳಿ ಖುಷಿಯ ಕೆನ್ನೆಗೆ ಮುತ್ತು ಕೊಟ್ಟಳು.

ಬೆಂಗಳೂರಿನಿಂದ ಹೊರಟ ರೈಲು ಸುಮಾರು ಮೂರು ಘಂಟೆಗಳ ಕಾಲ ಚಲಿಸಿ ಸಂಜೆಯ ವೇಳೆಗೆ ಸೇಲಂ ಜಂಕ್ಷನ್ ತಲುಪಿತು. ರೈಲು ಅಲ್ಲಿ ಸುಮಾರು ಹೊತ್ತು ನಿಲ್ಲುತ್ತದೆ ಎಂದು ತಿಳಿದು ವಿಶ್ವನಾಥ್ ತನ್ನ ಬ್ಯಾಗ್ ನಲ್ಲಿ ಇದ್ದ ಬರ್ತಡೇ
ಕೇಕ್ ಅನ್ನು ತೆಗೆದು ಸೀಟಿನ ಮೇಲೆ ಇಟ್ಟ.

ಇಬ್ಬರು ಮಕ್ಕಳ ಕೈಯಲ್ಲೂ ಒಂದೇ ಬಾರಿಗೆ ಕೇಕ್ ಕಟ್ ಮಾಡಿಸಿ "ಹ್ಯಾಪಿ ಬರ್ತ್ಡೇ ಟು ಯು.." ಎಂದು ಎಲ್ಲರೂ ಹಾಡಿ ಮಕ್ಕಳಿಗೆ ಹರಸಿದರು . ಭೋಗಿಯಲ್ಲಿ ಇದ್ದ ಪ್ರತಿಯೊಬ್ಬರಿಗೂ ಕೇಕ್ ಕೊಟ್ಟು ಬಂದರು ಖುಷಿ ಮತ್ತು ಹಿತ....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಜಡ್ಜ್ ಮೆಂಟ್ (ಪ್ರೀತಿ ಕುರುಡಲ್ಲ.....) ❤️❤️ « Rashmi Manjunath | ಪ್ರತಿಲಿಪಿ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯ ಪ್ರತಿಭಾವಂತ ಉದಯೋನ್ಮುಖ ಲೇಖಕರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ಕೃತಿ. ಜಡ್ಜ್ ಮೆಂಟ್ ( ಪ್...

ಮಹಾಪರ್ವ - 1 « ಅಪೂರ್ವ ಬಾಯರಿ | ಪ್ರತಿಲಿಪಿ 08/08/2026


ಸಂಜೆಯ ನೇಸರ ನಭದೊಂದಿಗೆ ಬಣ್ಣದೋಕುಳಿಯಾಡುತ್ತಾ ನಲ್ಮೆಯ ಭೂರಮೆಗೆ ವಿದಾಯ ಹೇಳುತ್ತಿರುವ ಹೊತ್ತದು. ಇಳಿಸಂಜೆಯಿಂದ ಇರುಳಿನ ಬಿಸುಪಿನಲ್ಲಿ ಕರಗಿ ಹೋಗುವ ಕೌತುಕದಲ್ಲಿತ್ತು ಮುಂಬೈ ಮಹಾನಗರ. ದಿನದ ಕಾಯಕ ಮುಗಿಸಿ ತಮ್ಮ ಪುಟ್ಟ ಗೂಡು ಸೇರಿಕೊಳ್ಳಲು ಧಾವಂತದಿಂದ ವರ್ಣಮಯವಾದ ಬಾನಿನ ತುಂಬಾ ಹಾರಾಡುತ್ತಿದ್ದವು ಬಾನಾಡಿಗಳು.

'ಈ ಸಂಜೆಯಂತೆ ನನ್ನ ಬದುಕು ಕೂಡ ದಿನವೂ ಇಷ್ಟೇ ರಮ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಕೃಷ್ಣ! ದಯವಿಟ್ಟು ಇವತ್ತಾದರೂ ನನ್ನ ಮನವಿಯನ್ನು ಈಡೇರಿಸು, ಪ್ಲೀಸ್ ಪ್ಲೀಸ್. ನೀನು ನನಗೆ ಇವತ್ತು ನಿರಾಸೆ ಮಾಡೋಲ್ಲ ಅಂದುಕೊಂಡಿದ್ದೀನಿ, ಅಲ್ವಾ ಕೃಷ್ಣ!' ಸ್ವಗತದಲ್ಲಿ ತನ್ನ ಇಷ್ಟ ದೈವದೊಂದಿಗೆ ಮಾತಾಡುತ್ತಾ ನಗರದ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯತ್ತ ನಡೆಯುತ್ತಿದ್ದಳು ಅವಳು.

ಆಸ್ಪತ್ರೆಯ ಮುಖ್ಯ ರಿಸೆಪ್ಷನ್ ಕೌಂಟರನ್ನು ದಾಟಿ, ಲಿಫ್ಟ್ ಮೂಲಕ ನೇರವಾಗಿ ನಾಲ್ಕನೇ ಮಹಡಿಗೆ ಬಂದಳು. ಅಲ್ಲಿಂದ ENT ವಿಭಾಗದ ಓಪಿಡಿಯತ್ತ ನಡೆಯಲು ಶುರುವಿಟ್ಟಾಗ ಕಾರಿಡಾರಿನಲ್ಲಿ ಸಾಗುತ್ತಿದ್ದ ನರ್ಸ್, ವಾರ್ಡ್ ಬಾಯ್, ಸ್ಟಾಫ್'ಗಳೆಲ್ಲ ಇವಳತ್ತ ಪರಿಚಯದ ನಗು ಬೀರಿದರು. ಹೇಳಿ ಕೇಳಿ ಆಕೆ ENT ವಿಭಾಗದ ಪ್ರಮುಖ ವೈದ್ಯೆ, ಮಾಧವಿ ಮುಕುಂದ್'ರ ಮಗಳು. ಅಷ್ಟಾದರೂ ಸೌಜನ್ಯತೆ ಇರಲೇ ಬೇಕಲ್ಲ!

ಇನ್ನು ಅವಳ ಪರಿಚಯವಿಲ್ಲದವರು ಅವಳನ್ನೇ ಅಡಿಯಿಂದ ಮುಡಿಯವರೆಗೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಆಕೆಯೇನೋ ವಿಶ್ವದ ಅನಭಿಷಿಕ್ತ ಅದ್ಭುತವೆಂಬಂತೆ!! ಗಗನದ ಬೆಳದಿಂಗಳು ದಾರಿ ತಪ್ಪಿ ಇಲ್ಲಿ ಬಂದು ಸೇರಿದೆಯಾ ಎಂಬ ಗುಮಾನಿ ಎಲ್ಲರಿಗೆ. ಅಂತಹ ದೈವೀಕ ರೂಪರಾಶಿ ಅವಳದ್ದು. ಅವಳನ್ನು ಒಂದು ಬಾರಿ ನೋಡಿದವರು ಅವಳನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವೇ ಇಲ್ಲ! ಆ ಪರಿಯ ಸಾತ್ವಿಕ ಚೆಲುವಿನ ಸಿರಿಯವಳು.

ಇವರುಗಳ ನೋಟದ ಮೇಲೆ, ಅದರಲ್ಲಿ ತುಂಬಿರುವ ಮೆಚ್ಚುಗೆಯ ಮೇಲೆ ಅವಳಿಗೆ ಲಕ್ಷ್ಯವೇ ಇರಲಿಲ್ಲ. ಅವಳು ಅವಳ ಪಾಡಿಗೆ ನಡೆದು ಹೋಗುತ್ತಲೇ ಇದ್ದಳು! ಮಸ್ತಿಷ್ಕದ ತುಂಬೆಲ್ಲಾ ನೂರಾರು ಯೋಚನೆಗಳು ದಾಂಗುಡಿಯಿಡುತ್ತಿರುವಾಗ ಹೊರ ಜಗತ್ತಿನ ಮೇಲೆ ಗಮನ ಹರಿಸುವುದು ಕೊಂಚ ಕಷ್ಟಸಾಧ್ಯ!

"ಡಾಕ್ಟರ್ ಮಾಧವಿ ಮುಕುಂದ್?" ENT ವಿಭಾಗದ ಎನ್'ಕ್ವೈರಿ ಡೆಸ್ಕ್ ಸಿಬ್ಬಂದಿಯ ಬಳಿ ಅವಳು ಅಷ್ಟೇ ವಿಚಾರಿಸಿದ್ದು.

"ಬಾಪ್ ರೇ! ಕೃಷ್ಣಪ್ರಿಯಾ ಮೇಡಂ!! ಆಪ್ ಕಬ್ ಆಯೇ?" ಆ ಮಹಿಳಾ ಸಿಬ್ಬಂದಿ ಇವಳನ್ನು ಕಂಡಾಗ ಸ್ನೇಹಮಯ ನಗು ಸೂಸಿದರು.

"ಅಭೀ ಆಯಿ" ನಕ್ಕವಳು ಯಾವುದೇ ರೋಗಿಗಳು ಇಲ್ಲದೇ ಇರುವುದನ್ನು ಸಿಬ್ಬಂದಿಯ ಬಳಿ ಕೇಳಿ ಮಗದೊಮ್ಮೆ ಖಾತ್ರಿಪಡಿಸಿಕೊಂಡು ತನ್ನ ತಾಯಿ ಮಾಧವಿಯವರ ಛೇಂಬರ್'ನತ್ತ ನಡೆದಳು...
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಮಹಾಪರ್ವ - 1 « ಅಪೂರ್ವ ಬಾಯರಿ | ಪ್ರತಿಲಿಪಿ ಸಂಜೆಯ ನೇಸರ ನಭದೊಂದಿಗೆ ಬಣ್ಣದೋಕುಳಿಯಾಡುತ್ತಾ ನಲ್ಮೆಯ ಭೂರಮೆಗೆ ವಿದಾಯ ಹೇಳುತ್ತಿರುವ ಹೊತ್ತದು. ಇಳಿಸಂಜೆಯಿಂದ ಇರುಳಿನ ಬಿಸುಪಿನ...

ಮೂಕ ಪ್ರೀತಿ - 1 « ಡಾ. ಮಮತಾ | ಪ್ರತಿಲಿಪಿ 08/08/2026


ಐ ಲವ್ ಯೂ ನಂದು ಆರಾಧನಾಳ ದನಿ ನಡುಗಿತ್ತು ಕಂಬನಿ ಒರೆಸಿಕೊಂಡಿದ್ದಳು. ಮರುಕ್ಷಣವೇ ಹೋ... ಎಂಬ ಗಲಾಟೆ ಕೇಳಿಬಂದಿತ್ತು. ಅಭಿಯ ಗೆಳೆಯರ ಬಳಗ ಜೊತೆಗೆ ಆರಾಧನಾಳ ತರಗತಿಯ ಕೆಲ ಹುಡುಗಿಯರೂ ಅಲ್ಲಿದ್ದರು. ಆರಾಧನಾ ಗಾಬರಿಯಾಗಿದ್ದಳು. ಅಭಿಯ ಮುಖದಲ್ಲಿ ಬರೀ ನಿರ್ಲಿಪ್ತ ಭಾವನೆಯನ್ನಷ್ಟೇ ಕಂಡ ಆರಾಧನಾಳ ಭಯ ಇಮ್ಮಡಿಯಾಗಿತ್ತು. ಅವರಲ್ಲೊಬ್ಬನಾದ ಅಜಯ್ ಅಭಿಯ ಬೆನ್ನು ತಟ್ಟುತ್ತಾ ಕಂಗ್ರಾಟ್ಸ್ ಮಗಾ.. ಕೊನೆಗೂ ಈ ಚಾಲೆಂಜಲ್ಲಿ ನೀನೇ ಗೆದ್ದೆ.. ಈ ಅಳುಮುಂಜಿ ಹಳ್ಳಿಗುಗ್ಗು ಕೈಯಲ್ಲಿ ಐ ಲವ್ ಯೂ ಅಂತ ಹೇಳ್ಸೇಬಿಟ್ಟೆ ಎಂದು ಹೇಳುವಾಗ ಎಲ್ಲರೂ ಜೋರಾಗಿ ನಕ್ಕರು. ಆರಾಧನಾ ಅಭಿಯತ್ತ ಗಾಬರಿಯಿಂದ ನೋಡಿದಳು. ಅಭಿ ತನ್ನ ದೃಷ್ಟಿಯನ್ನು ಇನ್ನೆತ್ತಲೋ ಹರಿಸಿದನು. ಅಲ್ಲೇ ಇದ್ದ ಆರಾಧನಾಳ ಸಹಪಾಠಿ ಪ್ರಿಯಾ ಏನೇ ಆರಾಧನಾ… ಹುಡುಗ ಶ್ರೀಮಂತ ಅಂತ ಗೊತ್ತಾಗಿದ್ದೇ ತಡ ನಿನ್ನ ಯೋಗ್ಯತೆಯನ್ನೂ ಮೀರಿ ಯೋಚಿಸೋದಾ? ಇವನ್ಯಾರು ಗೊತ್ತಾ? ನನ್ನ ಅಣ್ಣ.. ಕೋಟ್ಯಾಂತರ ರೂಪಾಯಿ ಆಸ್ತಿಗೆ ಒಡೆಯ.. ನೀನೋ ಹಳ್ಳಿ ಭಿಕಾರಿ… ದುಡ್ಡು ಅಂದ ಕೂಡ್ಲೆ ಬಾಯಿ ಬಿಟ್ಬಿಟ್ಟೆ ಅಲ್ಲಾ.. ನಿನ್ನಂತವರ ಬಗ್ಗೆ ನಾವು ಚಾಲೆಂಜ್ ಮಾಡಿದ್ದು ಸರಿಯಾಗಿದೆ ನೋಡು… ನೋಡಿದ್ರಾ ಫ್ರೆಂಡ್ಸ್ ಹಳ್ಳಿಹುಡುಗಿ ಒಳ್ಳೆತನ? ಎಂದಳು. ಆರಾಧನಾಳಿಗೆ ಮಾತೇ ಹೊರಡುತ್ತಿರಲಿಲ್ಲ… ‘ಈ ಪ್ರೀತಿಯಲ್ಲಿ ಇಷ್ಟು ಕಪಟವಿತ್ತೆ?’ ಎಂಬಂತೆ ಅಭಿಯತ್ತ ನೋಡಿದಳು. ಆಗಲೂ ಅವಳತ್ತ ದೃಷ್ಟಿ ಹರಿಸಲಿಲ್ಲ ಅಭಿ. ಅಜಯ್ ಅವನನ್ನೇನೆ ನೋಡ್ತೀಯಾ? ಅವ್ನು ನಿನ್ನನ್ನ ನಿಜವಾಗ್ಲೂ ಪ್ರೀತ್ಸಿದಾನೆ ಅಂದ್ಕೊಡ್ಯಾ? ನಿನ್ನನ್ನ ತನ್ನ ಪ್ರೀತಿ ಬಲೆಯಲ್ಲಿ ಬೀಳಿಸ್ಕೋತೀನಿ ನಿನ್ನ ಬಾಯಿಂದ ಐ ಲವ್ ಯೂ ಅಂತ ಹೇಳಿಸ್ತೀನಿ ಅಂತ ಚಾಲೆಂಜ್ ಮಾಡಿ ಗೆದ್ದಿದ್ದಾನೆ ಅಭಿ…” ಅಭಿಯ ಬೆನ್ನು ತಟ್ಟಿದನು. ಎಲ್ಲರೂ ಚಪ್ಪಾಳೆ ತಟ್ಟಿ ಅಭಿಯನ್ನು ಶ್ಲಾಘಿಸುತಿದ್ದರು. ಆರಾಧನಾಳ ಕಂಗಳು ಕೊಳಗಳಾಗಿದ್ದವು. ಅಭಿ ದಡದಡನೆ ನಡೆದು ಪಾರ್ಕಿನ ಹೊರಭಾಗಕ್ಕೆ ಬಂದು ತನ್ನ ಪ್ರೀತಿಯ ರಾಯಲ್ಎನ್ ಫೀಲ್ಡ್ ಹತ್ತಿ ವೇಗವಾಗಿ ಹೊರಟು ಹೋದನು. ಪ್ರಿಯಾ ಹೇ ಆರಾಧನಾ… ಅವನು ಎಲ್ಲಿಗೆ ಹೋದ ಅಂತ ಗೊತ್ತಾ??? ಅವ್ನು ಮದ್ವೆ ಆಗೋ ನಮ್ ಅತ್ತೆಮಗಳು ರಜನೀನ ಶಾಪಿಂಗ್ ಗೆ ಕರ್ಕೊಂಡು ಹೋಗೋಕೆ. ಎಂದಾಗ ಆರಾಧನಾಳ ಹೃದಯ ಮತ್ತೊಮ್ಮೆ ನುಚ್ಚುನೂರಾಗಿತ್ತು.. ಅವಳು ಅಲ್ಲೇ ಕುಸಿದು ಕುಳಿತಳು. ನಂದೂ… ಈ ಪ್ರೀತಿ ಇಷ್ಟು ದೊಡ್ಡ ಮೋಸನಾ? ಎಂದು ಬಿಕ್ಕಿದವಳೇ ಎದ್ದು ನಿಂತು ಸೋತ ಕಾಲುಗಳನ್ನೆಳೆದುಕೊಂಡು ಮನೆಯತ್ತ ನಡೆದಳು. ಈಗ ಕೃಷ್ಣನ ಮೂರ್ತಿಯೆದುರು ದಿಂಬನ್ನು ಬಿಗಿದಪ್ಪಿ ನಂದೂ… ಯಾಕೆ ಈ ರೀತಿ ಮೋಸಮಾಡ್ಬಿಟ್ರಿ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಮೂಕ ಪ್ರೀತಿ - 1 « ಡಾ. ಮಮತಾ | ಪ್ರತಿಲಿಪಿ ಅತ್ತೂ ಅತ್ತೂ ಆರಾಧನಾಳ ಕಂಗಳು ಊದಿಕೊಂಡಿದ್ದವು. ಎದುರಿಗಿದ್ದ ಕೃಷ್ಣನ ಮೂರ್ತಿಯನ್ನೇ ನೋಡುತ್ತಾ, “ಕೃಷ್ಣಾ.. ನಾನೇನು ತಪ್ಪು ಮಾಡಿದೆ ....

ಕಲ್ಯಾಣೋತ್ಸವ 💖 « ರೂಪಾ "💛ಕನ್ನಡತಿ❤" | ಪ್ರತಿಲಿಪಿ 07/08/2026


“ಮಮ್ಮಿ!” ರಾಘವ್‌ನ ಸಿಡಿಲು ಸದ್ದಿಗೆ ಮನೆಯ ತುಂಬೆಲ್ಲಾ ಹರಡಿದ್ದ ಧೂಪದ ಪರಿಮಳವೂ ನಡುಗಿದಂತಿತ್ತು. ಆರತಿ ತಟ್ಟೆ ಹಿಡಿದು ಓಡಿಬಂದ ಪ್ರತಿಭಾ ಮಗನ ಕೆಂಡದಂತಹ ಕಣ್ಣುಗಳನ್ನು ನೋಡಿ ತಬ್ಬಿಬ್ಬಾದರು. “ಯಾರ್ ಹೇಳಿದ್ದು ನಿಮ್ಗೆ ಇದೆಲ್ಲ ಮಾಡೋದಿಕ್ಕೆ? ಅವಳಿಗೆ ಸೀರೆ ಉಡಿಸಿ ಕೂರಿಸಿದ್ರೆ ಹಣ ಬರೋದಿಲ್ಲ. ಕಷ್ಟಪಟ್ಟು ದುಡಿಬೇಕು. ಈ ಪೂಜೆ ಎಲ್ಲ ಮಾಡ್ಬೇಡಿ ಅಂತ ಹೇಳಿಲ್ವಾ ನಾನು?” ಅವನ ಧ್ವನಿ ಮನೆಯ ಗೋಡೆಗಳಿಗೆ ಅಪ್ಪಳಿಸಿತು. ವರಮಹಾಲಕ್ಷ್ಮಿ ಪೂಜೆಯ ವೈಭವದಿಂದ ಕಂಗೊಳಿಸುತ್ತಿದ್ದ ಆ ಮನೆಯಲ್ಲಿ ದುಬಾರಿ ರೇಷ್ಮೆ ಸೀರೆಯುಟ್ಟು ಶಾಂತ ಕಳೆಯಿಂದ ಪೂಜೆಗೆ ಕುಳಿತಿದ್ದ ಪ್ರತಿಭಾ ಅವರ ಪಕ್ಕದಲ್ಲೇ ಸುನೀತಾ ನಿಂತಿದ್ದರು. ಆರು ಅಡಿ ಎತ್ತರದ ಕಟ್ಟುಮಸ್ತಾದ ದೇಹ ಕುರುಚಲು ಗಡ್ಡದ ರಾಘವ್ ಮೆಟ್ಟಿಲಿಳಿದು ಬಂದವನ ಕಣ್ಣುಗಳು ಹೊಗೆಯ ವಾಸನೆಗೆ ಸಂಕುಚಿಸಿದವು. ಅವನ ಗಂಭೀರತೆ ಇನ್ನಷ್ಟು ಹೆಚ್ಚಾಗಿತ್ತು. “ಗುಂಡು ನೀನ್ ಏನ್ ಮಾಡಿದ್ರು ನಾನ್ ಅಡ್ಡ ಬರೋದಿಲ್ಲ. ಅಂದಮೇಲೆ ಪೂಜೆ ನನ್ ಇಷ್ಟ ಅದಕ್ಕೆ ನೀನ್ ಅಡ್ಡ ಬರಬಾರದು” ಪ್ರತಿಭಾ ಮಗನ ಹಣೆಗೆ ಕುಂಕುಮ ಇಟ್ಟರು. ಆದರೆ ರಾಘವ್ ತನ್ನ ಕರ್ಚೀಫ್ ತೆಗೆದು ಅದನ್ನು ಒರೆಸಿಕೊಂಡ. “ನಂಗೆ ಈ ಸ್ಮೆಲ್ ಅಂದ್ರೆ ಆಗೋದಿಲ್ಲ ಅಂತ ಗೊತ್ತಿದ್ದೂ ಯಾಕ್ ಮಾಡಬೇಕಿತ್ತು? ಟಿಫನ್ ಆಚೆ ಮಾಡ್ಕೋತಿನಿ.” ಅವನು ಹೊರಡಲು ತಿರುಗಿದಾಗ ಮೂಲೆಯಲ್ಲಿ ನಿಂತಿದ್ದ ರಾಶಿ ಅವನ ಚಿಕ್ಕಮ್ಮನ ಮಗಳು ಕಣ್ಣುಗಳಲ್ಲಿ ನೋವು ತುಂಬಿಕೊಂಡು “ದೊಡ್ಡಮ್ಮ ಅಣ್ಣ ಯಾವಾಗ ನನ್ನ ಒಪ್ಪೋದು?” ಎಂದು ಪಿಸುಗುಟ್ಟಿದಳು. ಅಷ್ಟರಲ್ಲಿ “ಬಂದೆ ಪ್ರತಿ!” ಎನ್ನುತ್ತಾ ನಾರಾಯಣ್ ಬಂದರು. ರಾಶಿಯನ್ನು ನೋಡಿದೊಡನೆ “ಪ್ರತಿ ಎಷ್ಟು ಸರಿ ಹೇಳಿಲ್ಲ ಇವಳನ್ನ ನನ್ನೆದುರು ಬರೋದಿಕ್ಕೆ ಬಿಡ್ಬೇಡ ಅಂತ!” ಎಂದು ಹಲ್ಲು ಕಚ್ಚಿದರು. ರಾಶಿ ಕಣ್ಣೀರು ತುಂಬಿಕೊಂಡು ಓಡಿದಾಗ ಪ್ರತಿಭಾ ಅವರ ಮೊಗದಲ್ಲಿ ವ್ಯಂಗ್ಯದ ನಗೆಯೊಂದು ಮೂಡಿತ್ತು. ಆದರೆ ಇನ್ನೊಂದು ಮನೆಯಲ್ಲಿ ವೈದೇಹಿ ತನ್ನ ತಮ್ಮ ವಾಸುಕಿ ಎದುರು ನಿಂತಿದ್ದಳು. “ಅಪ್ಪಂಗೆ ನನ್ ಮದ್ವೆ ನೋಡೋಕು ಆಸೆ ಇತ್ತು ಆದ್ರೆ ಈ ರೀತಿ ನಾನ್ ಕಷ್ಟ ಪಡೋದನ್ನ ನೋಡೋಕೆ ಅಲ್ಲ” ತನ್ನ ತಂದೆಯ ಒಡವೆಗಳನ್ನು ಗಿರವಿ ಇಡಲು ಮುಂದಾದಾಗ ವಾಸುಕಿ ಸಿಟ್ಟಿನಿಂದ “ಈ ನಿನ್ನ ಒಡವೆ ಗಿರವಿ ಇಟ್ರೆ ಒಂದು ಲಕ್ಷ ಸಿಗುತ್ತೆ ಅಷ್ಟೇ. ನಂಗೆ ಬೇಕಿರೋದು ಒಂದು ವರೆ ಲಕ್ಷ. ಅದಕ್ಕೆ ಇವನ್ನ ಮಾರಿಬಿಡು! ಮಿನಿಮಮ್ 5 ಲಕ್ಷ ಸಿಗುತ್ತೆ ನನ್ ಓದಿಗೆ ಆಗುತ್ತೆ!” ಎಂದು ಅಬ್ಬರಿಸಿದ. “ಬೇಕಾಗಿಲ್ಲ! ನಂಗೊತ್ತು ನೀನ್ ಅಮ್ಮನಿಗೆ ಕಿವಿ ತುಂಬಿದಿಯ ಅಂತ. ನಂಗೊತ್ತು ಹೇಗೆ ಫೀ ಹೊಂದಿಸಬೇಕಂತ. ನನ್ನ ಎಜುಕೇಷನ್ ನಾನ್ ನೋಡ್ಕೋತೀನಿ!” ಅವನ ಮಾತುಗಳು ತೀಕ್ಷ್ಣವಾಗಿದ್ದವು.
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಕಲ್ಯಾಣೋತ್ಸವ 💖 « ರೂಪಾ "💛ಕನ್ನಡತಿ❤" | ಪ್ರತಿಲಿಪಿ ಮನೆಯ ತುಂಬಾ ಧೂಪದ ಹೊಗೆ.... ಅಲ್ಲಲ್ಲಿ ಹೂವಿನ ಅಲಂಕಾರ... ಆಚೆ ಬಾಳೆ ಕಂಬಗಳು... ಅಲಂಕಾರ ನೋಡಿಯೇ ಲಕ್ಷ್ಮಿ ಮನೆಯೊಳಗೆ ಬರುತ್ತಾಳೇನೋ.. ಅಷ್ಟ...

ಬಯಸದ ಈ ಬಂಧ 1💕💕 « 𝓟𝓻𝓪𝓶𝓲𝓵𝓪 ❣️ "Pragya" | ಪ್ರತಿಲಿಪಿ 07/08/2026


ವಾಟ್! ಮೆಟೀರಿಯಲ್ಸ್ ಇನ್ನ ಬಂದಿಲ್ವಾ? ಅಭಿನವ್‌ನ ಧ್ವನಿ ಕಚೇರಿಯ ಗಾಜಿನ ಗೋಡೆಗಳನ್ನು ನಡುಗಿಸಿತು. ಅವನ ಕಣ್ಣುಗಳಲ್ಲಿ ಸಿಟ್ಟು ಕೆಂಡದಂತೆ ಉರಿಯುತ್ತಿತ್ತು. ನಿತೀನ್ ಈಗ ನನ್ನ ಹತ್ತಿರ ಬಂದು ಹೇಳ್ತಾ ಇದೀಯಾ? ಯಾಕೆ ಬಂದಿಲ್ಲ ಅಂತ ವಿಚಾರಿಸುವುದು ಅಲ್ವಾ ನಿನ್ನ ಕೆಲಸ? ಕ್ಷಮಿಸಿ ಸರ್ ನಿತೀನ್ ತಲೆ ತಗ್ಗಿಸಿದ. ಅವರು ಯಾವಾಗಲೂ ಸಮಯಕ್ಕೆ ಸರಿಯಾಗಿ ಕಳುಹಿಸುತ್ತಿದ್ದರು ಅದಕ್ಕೆ ನಿನ್ನೆ ಖಚಿತಪಡಿಸಿಕೊಳ್ಳಲು ಹೋಗಲಿಲ್ಲ... ಇದೇ ನಿತೀನ್! ನಮ್ಮ ಸಣ್ಣ ನಿರ್ಲಕ್ಷ್ಯ ಊಹೆಗೂ ಮೀರಿದ ಹೊಡೆತ ಕೊಡುತ್ತೆ! MR ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಲೀಕ ಅಭಿನವ್ ರಾಮ್ ಬೃಂದಾವನ ನಿಲಯದ ಹಿರಿಯ ಮೊಮ್ಮಗ. ದಾನ ಧರ್ಮಕ್ಕೆ ಹೆಸರಾದ ಮಾಧವ್ ರಾಮ್ ಮತ್ತು ಸರೋಜಿನಿ ರಾಮ್ ದಂಪತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದವನು. ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವ ಅವನ ಕಂಪನಿ ಈಗ ಒಂದು ದೊಡ್ಡ ಮದುವೆಯ ಸಿದ್ಧತೆಯಲ್ಲಿತ್ತು. ಆದರೆ ನಾಡಿದ್ದು ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಬೇಕಾದ ಪ್ರಮುಖ ಸಾಮಗ್ರಿಗಳು ವಸಿಷ್ಠರ ಕಡೆಯಿಂದ ಇನ್ನೂ ತಲುಪಿರಲಿಲ್ಲ. ಒಂದು ಸರಿ ನಂಬಿಕೆ ಕಳೆದುಕೊಂಡರೆ ಮತ್ತೆ ಗಳಿಸೋಕೆ ಎಷ್ಟು ಕಷ್ಟ ಪಡಬೇಕು ಅಂತ ನಿನಗೆ ಗೊತ್ತಿದೆಯಾ? ಅಭಿನವ್‌ನ ಮಾತುಗಳಲ್ಲಿ ಆತಂಕ ಸ್ಪಷ್ಟವಾಗಿತ್ತು. ನಮ್ಮ ಕಂಪನಿ ಮೇಲೆ ಗ್ರಾಹಕರು ಇಟ್ಟಿರುವ ಭರವಸೆ ಕಳೆದುಕೊಂಡರೆ ಎಲ್ಲವೂ ಮುಗಿದಂತೆ. ಅವನು ತನ್ನ ಕೈಗಳನ್ನು ಮೇಜಿನ ಮೇಲೆ ಬಲವಾಗಿ ಒತ್ತಿದ. ಈ ಕಂಪನಿ ಅವನ ಕನಸು ಅವನ ತಾತಅಜ್ಜಿ ತಂದೆತಾಯಿಗಳ ಹೆಸರಿಗೆ ಕಳಂಕ ಬರದಂತೆ ನೋಡಿಕೊಳ್ಳುವುದು ಅವನ ಜವಾಬ್ದಾರಿ. ಇತ್ತ ಅವನ ಸೋದರಮಾವ ಭಾರ್ಗವ್ ರಾಮ್ ತನ್ನ SR ಕಲೆಕ್ಷನ್ಸ್ ಕಂಪನಿಯಲ್ಲಿ ತಂಗಿ ಅದಿತಿಗೆ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಪ್ರೋತ್ಸಾಹಿಸುತ್ತಿದ್ದ. ಆದರೆ ಅಭಿನವ್‌ಗೆ ಈಗ ಎದುರಾಗಿರುವುದು ಅದಕ್ಕಿಂತ ದೊಡ್ಡ ಸವಾಲು. ಸರ್ ವಸಿಷ್ಠರ ಕಡೆಯಿಂದ ಕರೆ ಬಂದಿದೆ ನಿತೀನ್ ಮತ್ತೆ ಕ್ಯಾಬಿನ್‌ಗೆ ನುಗ್ಗಿದ. ಅವರು ಹೇಳುತ್ತಿರುವುದು... ಸಾಮಗ್ರಿಗಳು ಬರುವುದಿಲ್ಲ ಎಂದು! ಅಭಿನವ್‌ನ ಮುಖ ಬಿಳಿಚಿಕೊಂಡಿತು. ಏನು? ಬರುವುದಿಲ್ಲವೆ? ಕಾರಣ? ಅವರು... ಅವರು ಬೇರೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ ಸರ್. ನಮ್ಮ ಆರ್ಡರ್ ಅನ್ನು ರದ್ದುಗೊಳಿಸಿದ್ದಾರೆ. ಬೇರೆ ಕಂಪನಿಯೊಂದಿಗೆ ಒಪ್ಪಂದ? ಅಭಿನವ್‌ನ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು ಸುಳಿದಾಡಿದವು. ಇದು ಕೇವಲ ನಿರ್ಲಕ್ಷ್ಯವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕೈವಾಡವಿದೆಯೇ? ಬೃಂದಾವನ ನಿಲಯದ ಪ್ರತಿಷ್ಠೆ ಅಭಿನವ್‌ನ ಕನಸು ಎಲ್ಲವೂ ಈಗ ಅಪಾಯದಲ್ಲಿದೆಯೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಬಯಸದ ಈ ಬಂಧ 1💕💕 « 𝓟𝓻𝓪𝓶𝓲𝓵𝓪 ❣️ "Pragya" | ಪ್ರತಿಲಿಪಿ ವಿ.ಸೂ = ಈ ಕಥೆ ಕೇವಲ ನನ್ನ ಕಲ್ಪನೆಯಲ್ಲಿ ಮೂಡಿ ಬರವಣಿಗೆ ರೂಪದಲ್ಲಿ ವ್ಯಕ್ತಪಡಿಸುತ್ತಿರುವ ಕಥೆಯಾಗಿದ್ದು ಬೇರೊಂದು ಕಥೆಯೊಂದಿಗೆ ಸಾ.....

07/08/2026

#ಪ್ರತಿಲಿಪಿ #ಪ್ರತಿಲಿಪಿಕನ್ನಡ #ಬರಹ #ಕನ್ನಡಬರಹಗಳು #ಕನ್ನಡಕಥೆಗಳು #ಕನ್ನಡಲೇಖಕರು #ಬರವಣಿಗೆ
#ಕನ್ನಡಸಾಹಿತ್ಯ #ಕಥೆಗಾರರು #ಕನ್ನಡಕೋಟ್ಸ್ #ಕನ್ನಡಮನಸ್ಸು #ಹೊಸಬರಹಗಾರರು

ಒಂದು ಮಿಡಿತ ಮತ್ತೊಂದು ಹೃದಯ (ಮುನ್ನುಡಿ) « ಅನಿತಾ ಹೊನ್ನಪ್ಪ "ಶಿವಭಕ್ತೆ" | ಪ್ರತಿಲಿಪಿ 07/08/2026


ಇನ್ನೂ ನಿದ್ರೆಯಿಂದ ಹೊರಬಂದಿಲ್ಲವೇ ಅಚಿಂತ್ಯ? ಮೃದುವಾದ ಆದರೂ ಮನಸ್ಸನ್ನು ಕೆರಳಿಸುವ ಆ ಧ್ವನಿ ಕೇಳಿ ಅಚಿಂತ್ಯ ಅರಸ್ ಕಿಟಕಿಯಿಂದ ಕತ್ತು ಹೊರಳಿಸಿದ. ಮಂಚದ ಮೇಲೆ ಬಾಡಿದ ಗುಲಾಬಿ ಮಲ್ಲಿಗೆಯ ರಾಶಿ. ಹಿಂದಿನ ರಾತ್ರಿಯ ಅಲಂಕಾರದ ಕುರುಹುಗಳು. ನಿಮ್ಮ ಕಾಫಿ ತಣ್ಣಗಾಗುತ್ತಿದೆ. ಡೈರಿ ಪುಟ ತಿರುವಿ ಹಾಕುವುದಕ್ಕಿಂತ ಬಿಸಿ ಕಾಫಿ ಕುಡಿಯುವುದು ಉತ್ತಮವಲ್ಲವೇ? ಕಾಲ್ಗೆಜ್ಜೆ ಸದ್ದು ಹತ್ತಿರವಾಯಿತು. ಬೆಳಗಿನ ತಿಳಿಯಾದ ಸೂರ್ಯನ ರಶ್ಮಿ ಅವನ ಮಬ್ಬುಗತ್ತಲ ಮನಸ್ಸನ್ನು ಬೆಳಗುತ್ತಿರಲಿಲ್ಲ. ಹೆಸರಿಗೆ ಅಚಿಂತ್ಯನಾದರೂ ಚಿಂತೆಯಲ್ಲೇ ಮುಳುಗಿದ್ದ. ಅವನ ಕಣ್ಣುಗಳು ಟೇಬಲ್ ಮೇಲಿದ್ದ ಡೈರಿಯ ಪುಟಗಳ ಮೇಲೆ ಸುಮ್ಮನೆ ಓಡಾಡುತ್ತಿದ್ದವು. ಪಕ್ಕದಲ್ಲಿ ತಣ್ಣಗಾದ ಕಾಫಿ ಕಪ್. ಅವನ ಮೊಗದಲ್ಲಿ ಖುಷಿಯಿರಲಿಲ್ಲ ದುಃಖವೂ ಇರಲಿಲ್ಲ ಕೇವಲ ಒಂದು ಬಗೆಯ ಬೇಸರ ಆಳವಾದ ವಿಷಾದ. ಆ ಕಿಣಿ ಕಿಣಿ ಗೆಜ್ಜೆ ಸದ್ದು ಅವನ ಮನಸಿನೊಳಗೆ ಮತ್ತಷ್ಟು ಬೇಸರ ಮೂಡಿಸುತ್ತಿತ್ತು. ಡೈರಿಯ ಒಂದು ಪುಟದಲ್ಲಿ ಮೂಡಿದ್ದ ಸುಂದರಿಯ ಚಿತ್ರ ಅವನ ಕಣ್ಣರಳಿಸಿತು. ಕಾಟನ್ ಸೀರೆ ಅರ್ಧ ಬಂಧಿಸಿದ ಕೂದಲು ತುಂಬು ಗಲ್ಲ... ಅದು ರಚಿತಾ. ಎಲ್ಲಾ ಸರಿ ಇರುವಾಗ ನೀನು ಕನಸುಗಳ ಬೆನ್ನೇರಿದೆ. ಪರಿಸ್ಥಿತಿ ಕೈ ಮೀರಿದಾಗ ಅದರ ಅರಿವು ಸಹ ಇಲ್ಲದಂತಾಗಿರುವೆ. ನಿನ್ನ ಕನಸೇನೋ ಈಡೇರಿತು ಆದರೆ ನನ್ನ ಪ್ರೀತಿ? ಅದಕ್ಕೇನು ಉತ್ತರವಿದೆ ನಿನ್ನಲ್ಲಿ? ವಾಪಸ್ ಬಂದರೆ ನಾನು ಕೂಡ ಏನು ಮಾಡಲಾರೆ. ಮುಗಿದ ಅಧ್ಯಾಯವಾಯಿತು ಈ ಪ್ರೇಮ. ಸಾಗಿಬಂದ ದಾರಿ ಈಗ ಕವಲೊಡೆದಿದೆ. ನಾನೀಗ ಎರಡು ದೋಣಿಗಳ ಮೇಲೆ ಕಾಲಿಟ್ಟಿರುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಲೇಬೇಕಿದೆ. ಅದು ಯಾವುದೆಂದು ಹೇಗೆ ಹೇಳಲಿ? ಡೈರಿಯ ಆ ಸಾಲುಗಳು ಅವನ ಮನಸ್ಸನ್ನು ಕಲಕಿದವು. ನಾಲ್ಕು ವರ್ಷಗಳ ಹಿಂದೆ ಆ ಕಾಲೇಜಿನ ಮೊದಲ ದಿನ ತಡವಾಗಿ ಬಂದ ರಚಿತಾಳನ್ನು ಕಂಡ ಕ್ಷಣದಿಂದಲೇ ಅವನ ಹೃದಯದಲ್ಲಿ ಅವಳು ಮನೆ ಮಾಡಿದ್ದಳು. ಆಕ್ಸ್‌ಫರ್ಡ್ ಕನಸು ಕಂಡಿದ್ದ ಆ ಹುಡುಗಿ ಅವನ ಪ್ರೀತಿಯನ್ನು ಅರಿಯಲೇ ಇಲ್ಲವೇ? ಅಚ್ಚು ಊಟಕ್ಕೆ ಬಾ. ಅಪ್ಪ ನಿನ್ನನ್ನು ಹುಡುಕುತ್ತಿದ್ದಾರೆ ತಾಯಿಯ ಧ್ವನಿ ಕೇಳಿಬಂದಿತು. ನಿನ್ನ ಮಗ ಕೆಲಸದ ವಿಚಾರದಲ್ಲಂತೂ ನನ್ನ ಮಾತು ಕೇಳಿಲ್ಲ. ಮದುವೆ ವಿಚಾರದಲ್ಲೂ ಕೇಳಲ್ಲ ಅಂತ ಗೊತ್ತಿದೆ. ಅದಕ್ಕೆ ಹೇಳ್ತಾ ಇದ್ದೀನಿ ಯಾವುದಾದರೂ ಹುಡುಗಿನ ಲವ್ ಗಿವ್ ಮಾಡಿದ್ರೆ ಈಗಲೇ ಹೇಳೋಕೆ ಹೇಳು. ಅವಳಾದರೂ ಬಂದು ನನ್ನ ಫ್ಯಾಕ್ಟರಿ ನೋಡಲಿ ತಂದೆ ರಾಜೇಂದ್ರರ ಮಾತುಗಳು ಅವನ ಕಿವಿಯಲ್ಲಿ ಗುಯ್ಗುಡುತ್ತಿದ್ದವು. ಆದರೆ ಈಗ ಮದುವೆಯಾಗಿ ತನ್ನ ಕೋಣೆಯಲ್ಲಿ ಬೇರೊಬ್ಬಳ ಕಾಲ್ಗೆಜ್ಜೆ ಸದ್ದು ಕೇಳುತ್ತಿರುವಾಗ ಅವನ ಮನಸ್ಸು ಮತ್ತಷ್ಟು ಗೊಂದಲಕ್ಕೀಡಾಗಿತ್ತು. ಡೈರಿಯ ಪುಟದಲ್ಲಿರುವ ರಚಿತಾಳ ಚಿತ್ರಕ್ಕೂ ಮಂಚದ ಮೇಲೆ ಬಾಡಿದ ಹೂಗಳಿಗೂ ಈ ಕೋಣೆಯಲ್ಲಿರುವ ಹೆಣ್ಣಿಗೂ ಏನು ಸಂಬಂಧ? ಅವನು ಪ್ರೀತಿಸಿದವಳು ರಚಿತಾ ಆಗಿದ್ದರೆ ಈ ಮದುವೆ ಯಾರೊಂದಿಗೆ? ಅವಳು ಯಾರನ್ನೂ ಪ್ರೀತಿಸದೆ ಪಾಣಿಗ್ರಹಣದೊಳು ಬಂಧಿಯಾದಳು ಎಂದರೆ ಆ ಬಂಧನಕ್ಕೆ ಕಾರಣವೇನು?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಒಂದು ಮಿಡಿತ ಮತ್ತೊಂದು ಹೃದಯ (ಮುನ್ನುಡಿ) « ಅನಿತಾ ಹೊನ್ನಪ್ಪ "ಶಿವಭಕ್ತೆ" | ಪ್ರತಿಲಿಪಿ ಅವನು ಅವಳನ್ನು ಪ್ರೀತಿಸಿದ.. ಅವಳೂ ಅವನನ್ನು ಪ್ರೀತಿಸಿದಳು.. ಅವನು ಅವಳನ್ನು ಪ್ರೀತಿಸಿದ, ಆದರೆ ಅವಳು ಯಾರನ್ನೂ ಪ್ರೀತಿಸದೆ, ಪಾಣಿಗ್ರ.....

ಸೀತೆಯ ಆತ್ಮವೇ ರಾಮ 01 « ರೂಪ ನಾಗರಾಜ್ | ಪ್ರತಿಲಿಪಿ 07/08/2026


ಹೇಯ್ ಯು! ಆ ಗಂಭೀರ ದನಿ ಅಂಗಳದಲ್ಲಿ ಸಗಣಿ ನೀರು ಚಿಮುಕಿಸುತ್ತಿದ್ದ ಸೀತಮ್ಮನ ಬೆನ್ನಿಗೆ ಬಂದು ಅಪ್ಪಳಿಸಿತು. ಅವಳ ಕೈಯಲ್ಲಿದ್ದ ಚಂಬು ಕೆಳಗೆ ಬಿದ್ದು ಉಳಿದ ಸಗಣಿ ನೀರು ಆತನ ಬಿಳಿ ಶರ್ಟ್ ಮೇಲೆ ಅಭಿಷೇಕವಾಯಿತು. ಸೋರಿ ಸೋರಿ! ಭಯದಿಂದ ನುಡಿದಳು ಸೀತಾ ಕಣ್ಣು ಮಿಟುಕಿಸದೆ. ಆತನು ತನ್ನ ನೆನೆದ ಶರ್ಟ್ ಬಿಚ್ಚಿ ಅವಳ ಮುಖದ ಮೇಲೆ ಎಸೆದ ನೀಟಾಗಿ ಒಗೆದು ಒಣಗಿಸಿ ಐರನ್ ಮಾಡ್ಕೊಂಡ್ ತಗೊಂಡ್ ಬಾ! ಇನ್ನೂ ಮುಂಜಾನೆ ಐದು ಗಂಟೆಯೂ ಆಗಿರಲಿಲ್ಲ. ಅತ್ತೆಯ ಬೇಗ ಅಂಗಳ ಗುಡಿಸಿ ರಂಗೋಲಿ ಹಾಕೆ! ಎಂಬ ಕೂಗಿಗೆ ಎದ್ದು ಬಂದಿದ್ದ ಸೀತಾ ಇಡೀ ರಾತ್ರಿ ಮನೆ ಕೆಲಸ ಅತಿಥಿಗಳ ರೂಮು ಸ್ವಚ್ಛಗೊಳಿಸಿ ಅರ್ಧ ಗಂಟೆ ನಿದ್ದೆ ಮಾಡಿ ಪರೀಕ್ಷೆಗೆ ಓದಿದ್ದಳು. ಇಂದು ಅವಳ ದೊಡ್ಡತ್ತೆ ಮಗಳು ಪ್ರಿಯಾಗೆ ಹುಡುಗ ನೋಡುವ ಶಾಸ್ತ್ರ. ಆದರೆ ಆ ಹುಡುಗನ ಕೋಪಾಗ್ನಿ ಅವಳ ಮೇಲೆ ಹೀಗೆ ಸಿಡಿಯುತ್ತದೆ ಎಂದು ಊಹಿಸಿರಲಿಲ್ಲ. ಲೋ ದಶರತ್ ಪ್ಲೀಸ್ ಮಾರಾಯ ನಾನ್ ಹುಡ್ಗಿನೋಡೊ ಕಾರ್ಯಕ್ರಮನ ಮಾತ್ರ ನಿನ್ ಕೋಪದಿಂದ ಹಾಳ್ ಮಾಡ್ಬೇಡ! ಎಂದು ಬೇಡಿಕೊಳ್ಳುತ್ತಾ ಬಂದ ಪರಿಣಯ್ ದಶರಥ್‌ನನ್ನು ಸಮಾಧಾನಪಡಿಸಲು ಯತ್ನಿಸಿದ. ಆದರೆ ದಶರಥ್‌ನ ಕಣ್ಣುಗಳು ಸೀತೆಯನ್ನೇ ಕೊರೆಯುತ್ತಿದ್ದವು. ಶರ್ಟ್ ಮೇಲೆ ಒಂದ್ ಮಾರ್ಕ್ ಇದ್ರೂ ನಿನ್ ಮುಖದ ಮೇಲೆ ಮಚ್ಚೆ ಬೀಳುತ್ತೆ ಹುಷಾರ್! ಎಂದು ಎಚ್ಚರಿಸಿ ಒಳ ನಡೆದ. ಸೀತಾ ತಕ್ಷಣ ಬಿಸಿ ನೀರಿಗಾಗಿ ಅಡುಗೆ ಮನೆಗೆ ಧಾವಿಸಿದಳು. ಗೀಸರ್ ಕೆಟ್ಟಿದ್ದರಿಂದ ಬಕೆಟ್‌ನಲ್ಲಿ ಬಿಸಿ ನೀರು ಹೊತ್ತುಕೊಂಡು ಹೋದಾಗ ನನ್ ಶರ್ಟ್ ಎಲ್ಲಿ? ಎಂದು ಮತ್ತೆ ಅಬ್ಬರಿಸಿದ. ಒಗೆದು ತರ್ತೀನಿ ಸ್ವಲ್ಪ ಸಮಯ ಕೊಡಿ ಎಂದಾಗ ಬ್ರೆಷ್ ಪೇಸ್ಟ್ ಎಲ್ಲಿ? ಎಂದು ಕೇಳಿದ. ಬೇವಿನ ಕಡ್ಡಿ ಕೊಟ್ಟಾಗ ಇದ್ರಲ್ಲಿ ಹೇಗೆ? ಎಂದು ಹುಬ್ಬು ಗಂಟಿಕ್ಕಿದ. ಅವಳು ಶರ್ಟ್ ಒಗೆದು ಒಣಗಲು ಹಾಕಿದ್ದಳು. ಆದರೆ ಅವಳ ಹಸಿರು ದುಪ್ಪಟ್ಟಾ ಪಕ್ಕದಲ್ಲೇ ಒಣಗುತ್ತಾ ಬಣ್ಣ ಬಿಟ್ಟು ಅವನ ಬಿಳಿ ಶರ್ಟಿನ ಕಾಲರ್‌ಗೆ ಹಸಿರು ಬಣ್ಣ ಹಚ್ಚಿತ್ತು. ಮುಗೀತು ನನ್ ಕಥೆ! ಎಂದುಕೊಳ್ಳುವಷ್ಟರಲ್ಲಿ ದಶರಥ್ ಅವಳನ್ನು ಗೋಡೆಗೆ ಅದುಮಿದ. ಅವನ ಉಸಿರಿನ ಶಬ್ದ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಸ್ ಸೋರಿ ಮತ್ತೆ ಒಗೆದು ಕೊಡ್ತೀನಿ ಬೇಕಾದ್ರೆ ಎಂದು ಕಣ್ಣು ಮುಚ್ಚಿಕೊಂಡೇ ನುಡಿದಳು. ಇಲ್ಲಿ ಗಂಧದ ಮರ ಏನಾದ್ರು ಇದ್ಯಾ? ಎಂದು ಗಂಭೀರವಾಗಿ ಕೇಳಿದ. ಆತ ತನ್ನನ್ನೇ ವಾಸನೆ ನೋಡುತ್ತಿದ್ದಾನೆಂದು ಅರಿತಾಗ ಅವಳ ಕಣ್ಣಲ್ಲಿ ನೀರು ಜಲಧಾರೆಯಾಗಿ ಹರಿಯಿತು. ಅವಳನ್ನು ಗೋಡೆಗೆ ಅದುಮಿ ಗಂಧದ ವಾಸನೆ ಹುಡುಕುತ್ತಿದ್ದ ಆತ ಯಾರು? ಪರೀಕ್ಷೆ ಬರೆಯಲೇಬೇಕಾದ ಸೀತಾ ಈ ಅತಿಥಿಗಳ ಸೇವೆ ಅತ್ತೆಯರ ಕಾಟದ ನಡುವೆ ಕಾಲೇಜಿಗೆ ಹೋಗಲು ಸಾಧ್ಯವಾಗುವುದೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಸೀತೆಯ ಆತ್ಮವೇ ರಾಮ 01 « ರೂಪ ನಾಗರಾಜ್ | ಪ್ರತಿಲಿಪಿ ನಿಡಗಲ್ಲು ಬೆಟ್ಟ ಹತ್ತಿ ಕಾಲೆಲ್ಲ ನೋವು ಅಂತಾ ಮಲಗಿ ಬಿಟ್ಲು. ಪ್ರತಿ ವರ್ಷ ಶ್ರಾವಣದ ಕಡೆಯ ಸೋಮವಾರ ಯಾರು ತಪ್ಪಿಸಿದರು ಇವಳು ತಪ್ಪದೇ ರ...

ಒಲವೇ ನೀನೊಲಿದಾಗ... ಭಾಗ 1💐 « S Ram Shetty | ಪ್ರತಿಲಿಪಿ 07/08/2026


“ಡಾಕ್ಟರ್ ನನ್ನ ಮಗುವನ್ನ ಉಳಿಸಿ! ನನ್ನ ಮಗು ಬದುಕಬೇಕು!” ಮಳೆಗಾಲದ ರಣಮಳೆಯ ನಡುವೆ ಗುಡುಗು ಸಿಡಿಲಿನ ಆರ್ಭಟಕ್ಕೆ ಆಸ್ಪತ್ರೆಯ ಕಾರಿಡಾರ್ ನಡುಗುತ್ತಿದ್ದರೂ ಪ್ರಸವ ವೇದನೆಯಿಂದ ನರಳುತ್ತಿದ್ದ ಆಕೆಯ ಧ್ವನಿ ಡಾಕ್ಟರ್ ಆಕಾಶ್ ಕಿವಿಗೆ ಅಪ್ಪಳಿಸಿತು. ರಕ್ತಸಿಕ್ತವಾಗಿ ಸ್ಟ್ರೆಚರ್ ಮೇಲೆ ಮಲಗಿದ್ದ ಆಕೆ ತನ್ನ ಹೊಟ್ಟೆ ಹಿಡಿದುಕೊಂಡು “ನಾನು ಜಮೀನ್ದಾರ ನಾರಾಯಣ್ ಅವರ ಮಗಳು. ನನ್ನ ತಂದೆ ನಿಮಗೆ ಮಾಡಿದ ಉಪಕಾರದ ಋಣ ತೀರಿಸೋ ಸಮಯ ಇದು. ದಯವಿಟ್ಟು ನನ್ನ ಮಗುವನ್ನ ಕಾಪಾಡಿ!” ಎಂದು ಕೈಮುಗಿದಳು. ಆಕಾಶ್ ಆಕೆಯ ಕಣ್ಣುಗಳಲ್ಲಿ ಕಂಡ ಭಯ ಮತ್ತು ದೃಢತೆಗೆ ಮೌನವಾದರು. “ಡಾಕ್ಟರ್ ನನ್ನ ಕಾರಲ್ಲಿ ಒಂದು ಪುಟ್ಟ ಡೈರಿ ಇದೆ. ಅದನ್ನ ತರಿಸಿ. ಇದರಲ್ಲಿ ನನ್ನ ಮಗುವನ್ನ ಯಾರಿಗೆ ತಲುಪಿಸಬೇಕೋ ಅವರ ಪೂರ್ತಿ ವಿವರ ಇದೆ. ಮತ್ತೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ನಾನೂ ಮಗುನೂ ಸತ್ತು ಹೋಗಿದ್ದೇವೆ ಅಂತ ಹೇಳಿ. ದಯವಿಟ್ಟು...” ಆಕೆ ಡೈರಿಯನ್ನು ಆಕಾಶ್ ಕೈಗಿಟ್ಟು ಪ್ರಜ್ಞೆ ಕಳೆದುಕೊಂಡಳು. ಮರುದಿನ ಬೆಳಿಗ್ಗೆ “ಡಾಕ್ಟರ್ ಆ ಪೇಶೆಂಟ್ ಎಲ್ಲೂ ಕಾಣಿಸ್ತಾ ಇಲ್ಲ!” ನರ್ಸ್‌ನ ಆತಂಕದ ಮಾತು ಆಕಾಶ್‌ರನ್ನು ಬೆಚ್ಚಿಬೀಳಿಸಿತು. “ಏನ್ ಹೇಳ್ತಿದ್ದೀರಿ ಸಿಸ್ಟರ್? ರಾತ್ರಿ ಡೆಲಿವರಿ ಆದವರು ಎಲ್ಲಿಗೆ ಹೋಗೋಕೆ ಸಾಧ್ಯ?” ಆಕಾಶ್‌ಗೆ ನಂಬಲಾಗಲಿಲ್ಲ. ಆಕೆಯ ತಂದೆ ನಾರಾಯಣ್ ಅವರ ಮನೆಗೆ ಹೊರಟ ಆಕಾಶ್‌ಗೆ ಅಲ್ಲಿ ಕಾದಿದ್ದು ಮತ್ತೊಂದು ಆಘಾತ. “ಜಮೀನ್ದಾರರು ಹೋಗ್ಬಿಟ್ರು...!” ಜನರ ಆಕ್ರಂದನ ಕೇಳಿ ಆಕಾಶ್ ದಿಗ್ಭ್ರಮೆಗೊಂಡರು. ಆಕೆಯ ಮಾತುಗಳು ಆ ಡೈರಿ... ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಂತೆ ಭಾಸವಾಯಿತು. ಆ ಡೈರಿ ತೆರೆದು ಓದಿದಾಗ ಆಕಾಶ್‌ಗೆ ತಲೆ ಸುತ್ತಿದಂತಾಯಿತು....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಒಲವೇ ನೀನೊಲಿದಾಗ... ಭಾಗ 1💐 « S Ram Shetty | ಪ್ರತಿಲಿಪಿ ಮಳೆಗಾಲದ ಸಮಯವದು. ರಾತ್ರಿ ಎಡೆಬಿಡದೆ ಸುರಿಯುತ್ತಿರುವ ಮಳೆ, ಗುಡುಗು ಸಿಡಿಲಿನ ಜೊತೆ ಗಾಳಿಯ ರೌದ್ರ ನರ್ತನವೂ ಜೋರಾಗಿತ್ತು. ಆ ರಣ ಮಳೆಯ...

ಶ್ರೀರಸ್ತು ಶುಭಮಸ್ತು -1 « ತೇಜಸ್ವಿನಿ ರಾಜಶೇಖರ್ "ಅರಗಿಣಿ" | ಪ್ರತಿಲಿಪಿ 07/08/2026


“ಯಾರು ನೀನು? ನನ್ನ ಕನಸುಗಳ ಬಗ್ಗೆ ನಿನಗೆ ಹೇಗೆ ಗೊತ್ತು?” ಶ್ರೀನಿಧಿ ರೋಷದಿಂದ ಅವಳ ರಟ್ಟೆ ಹಿಡಿದು ಕೇಳಿದ. “ಕೈ ಬಿಡಿ ನೋಯ್ತಿದೆ!” ಸಾಗರಿಕ ನೋವಿನಿಂದ ಚೀರಿದಳು ಮುಖ ಕಿವುಚಿ ಕಣ್ಣೀರು ಧುಮುಕುತ್ತಿತ್ತು. “ಸುಳ್ಳು ಹೇಳ್ತಿದ್ದೀಯಾ! ಯಾರು ನೀನು?” ಆತ ಮತ್ತೊಮ್ಮೆ ರಟ್ಟೆ ಅದುಮಿದ. ನೋವು ಕಂಡವನೇ ಕೈ ಬಿಟ್ಟು “ಛೆ!” ಎಂದು ಟೇಬಲ್‌ಗೆ ಮುಷ್ಠಿಯಿಂದ ಗುದ್ದಿದ. ಸಿಂಗಾಪುರದ ಶ್ರೀ ಗ್ರೂಪ್ ಆಫ್ ಕಂಪನೀಸ್‌ನ ಸಿಇಓ ಶ್ರೀನಿಧಿ ಹೆಗಡೇಕಟ್ಟೆ ಕೆಲವೇ ವಾರಗಳ ಹಿಂದೆ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಕೇಳಲು ಬಂದಿದ್ದ ಸಾಗರಿಕ ಭಟ್ ಎಂಬ ಯುವತಿಯನ್ನು “ಸ್ವಾಭಿಮಾನವಿದ್ದರೆ ನನ್ನ ಕಂಪನಿಯಲ್ಲಿ ಕೆಲಸ ಮಾಡು” ಎಂದು ಗದರಿ ಕಳುಹಿಸಿದ್ದ. ಆದರೆ ಇಂದು ಅದೇ ಸಾಗರಿಕ ಡಾ|| ಸಾಗರಿಕ ಭಟ್ ಎಂಬ ಹೆಸರಿನಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಪ್ರಭಾವಶಾಲಿ ಪ್ರೊಫೈಲ್‌ನೊಂದಿಗೆ ಅವನ ಮುಂದೆ ನಿಂತಿದ್ದಳು. ಆಕೆಯ ಅರ್ಹತೆಗಳನ್ನು ನೋಡಿ ಶ್ರೀನಿಧಿಗೆ ತಾನು ತಪ್ಪು ತಿಳಿದುಕೊಂಡೆನೇ ಎಂಬ ಗೊಂದಲ. “ರೀ ಮಿಸ್ಟರ್ ನಿಮಗೇನು ಬುದ್ಧಿ ಭ್ರಮಣೆ ಆಗಿದ್ಯಾ?” ಸಾಗರಿಕ ಕಣ್ಣೀರೊರೆಸಿ ಧೈರ್ಯದಿಂದ ಕೇಳಿದಳು. “ವಾಟ್!” ಶ್ರೀನಿಧಿ ಕೋಪದಿಂದ ಅವಳೆಡೆಗೆ ತಿರುಗಿದ. “ನೀವು ಇಂಟರ್ವ್ಯೂಗೆ ಕರೆದಿರೋದು ಯಾವ ಪೊಸಿಷನ್ ಬಗ್ಗೆ ಎಂದೆಲ್ಲಾ ಹೇಳಿಯೇ ಅಲ್ಲವಾ? ಆದ್ದರಿಂದ ನಿಮ್ಮ ಕಂಪನಿ ಬಗ್ಗೆ ಸ್ಟಡಿ ಮಾಡಿ ಬಂದೆ ಅಷ್ಟೇ. ಅದಿಕ್ಕೆ ಹೀಗೆ ನಡೆದುಕೊಳ್ಳುವುದು?” ಆಕೆ ಮೆತ್ತಗಿನ ಧ್ವನಿಯಲ್ಲಿ ಹೇಳಿದಳು. ಶ್ರೀನಿಧಿಯ ಮನಸ್ಸು ಮರುಗಿದರೂ “ಪ್ರಾಜೆಕ್ಟ್ ನೇಮ್ ಮೆಂಷನ್ ಮಾಡಿಲ್ಲ... ಈ ಹುಡುಗಿಗೆ ಇದೆಲ್ಲ ಹೇಗೆ ತಿಳಿಯಿತು?” ಎಂಬ ಪ್ರಶ್ನೆ ಕಾಡಿತು. “ನಾನು ಇಲ್ಲಿ ಇಂಟರ್ವ್ಯೂಗೆ ಬಂದಿಲ್ಲ ಬದಲಿಗೆ ಒಂದು ಡೀಲ್ ಮಾಡಲು ಬಂದಿದ್ದೇನೆ” ಸಾಗರಿಕ ಗಂಭೀರವಾಗಿ ಹೇಳಿದಳು. ಶ್ರೀನಿಧಿ ಆಘಾತಕ್ಕೊಳಗಾದ. “ನಿಮ್ಮ ಕನಸಿನ ‘ಅವೆಂಜರ್’ ಹಡಗನ್ನು ಮೂರು ತಿಂಗಳೊಳಗೆ ನಿಮ್ಮ ಕಂಪನಿಯ ಪಾಲಾಗುವಂತೆ ಮಾಡುತ್ತೇನೆ. ಆದರೆ ನೀವು ಪ್ರೇರಣಾ ಎಜುಕೇಷನಲ್ ಟ್ರಸ್ಟ್‌ಗೆ ಹತ್ತು ಕೋಟಿ ರೂಪಾಯಿ ಪಾವತಿಸಬೇಕು.” “ವಾಟ್? ಹತ್ತು ಕೋಟಿ?” ಶ್ರೀನಿಧಿ ನಕ್ಕ. “ನೀನು ಓದಿದ ಓದಿಗೆ ಈ ಹುದ್ದೆಗೆ ಅರ್ಹಳೇನೋ ಸರಿ. ಆದರೆ ಅದಕ್ಕೆ ತಕ್ಕ ಸಂಬಳ ಸಿಗುತ್ತೆ. ಏಕಾಏಕಿ ಹತ್ತು ಕೋಟಿ ಡೀಲ್ ಮಾಡಲು ನೀನೇನು ಬ್ಯುಸಿನೆಸ್ ಮಾಡಲು ಬಂದಿದ್ದೀಯಾ ನನ್ನ ಜೊತೆ?” “ಹೌದು ಮಿಸ್ಟರ್ ಶ್ರೀನಿಧಿಯವರೇ. ಇದೊಂತರ ಬ್ಯುಸಿನೆಸ್ ಅಂದುಕೊಳ್ಳಿ. ನೀವು ಪೆ ಮಾಡಬೇಕಿರುವುದು ನನಗಲ್ಲ ಪ್ರೇರಣಾ ಎಜುಕೇಷನಲ್ ಟ್ರಸ್ಟ್‌ಗೆ. ಒಂದು ವೇಳೆ ಕೊಟ್ಟಿಲ್ಲ ಎಂದರೆ ಅವೆಂಜರ್ ಪ್ರಾಜೆಕ್ಟ್ ರಾಬರ್ಟ್ ಕೈನಲ್ಲಿ ಇರುತ್ತೆ.” ಸಾಗರಿಕಳ ಮಾತು ಕೇಳಿ ಶ್ರೀನಿಧಿ ಬೆಚ್ಚಿಬಿದ್ದ. “ಇವೆಲ್ಲ ನಿನಗೆ ಹೇಗೆ ಗೊತ್ತು? ನಿಜ ಹೇಳು ಯಾರು ನೀನು?” ಸಾಗರಿಕಳ ಅಸಾಮಾನ್ಯ ಜ್ಞಾನ ಮತ್ತು ಅಚಲ ವಿಶ್ವಾಸ ಶ್ರೀನಿಧಿಯನ್ನು ದಿಗ್ಭ್ರಮೆಗೊಳಿಸಿತ್ತು. ಆಕೆ ನಿಜವಾಗಿಯೂ ಯಾರು? ಕೇವಲ ಒಂದು ವಾರದಲ್ಲಿ ಆಕೆ ಶ್ರೀನಿಧಿಯ ಸಾಮ್ರಾಜ್ಯದ ರಹಸ್ಯಗಳನ್ನು ಹೇಗೆ ಭೇದಿಸಿದಳು? ಈ ಹತ್ತು ಕೋಟಿ ಡೀಲ್ ಶ್ರೀನಿಧಿಯ ಅಹಂಕಾರವನ್ನು ಮುರಿಯುವುದೇ ಅಥವಾ ಆತನ ಕನಸಿನ ‘ಅವೆಂಜರ್’ ಹಡಗನ್ನು ನಿಜವಾಗಿಯೂ ಅವನ ಕೈಗೆ ತಲುಪಿಸುವುದೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಶ್ರೀರಸ್ತು ಶುಭಮಸ್ತು -1 « ತೇಜಸ್ವಿನಿ ರಾಜಶೇಖರ್ "ಅರಗಿಣಿ" | ಪ್ರತಿಲಿಪಿ ಶ್ರೀ ಹೇಗಿದ್ಯೋ ಕಂದ.... ಯಾವಾಗ ಭಾರತಕ್ಕೆ ಬರ್ತೀಯೋ ...ನಿನ್ನ ತುಂಬಾ ಮಿಸ್ ಮಾಡ್ತಾ ಇದೀವಿ ಕಂದ .ಅಷ್ಟರಲ್ಲಿ ಮತ್ತೊಬ್ಬರು ಅಯ್ಯೋ ಸಾಕು ಕ...

Want your business to be the top-listed Furniture Store in Bangalore?

Click here to claim your Sponsored Listing.

Location

Telephone

Address


PRATILIPI, Sona Towers, 4th Floor, No. 2, 26, 27 And 3, Hosur Road, Krishna Nagar, Industrial Area, Near Forum Mall
Bangalore
560029